ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ನ್ಯಾಕ್ ೩.೬೨ ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ಮಾನ್ಯತೆ ಪಡೆದು, ರಾಜ್ಯದ ಪ್ರಮುಖ ೫ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ದೇಶದ ೧೦೦ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಗುರುತಿಸಿಕೊಂಡಿದೆ. == ಕಾಲೇಜಿನ ಚರಿತ್ರೆ == ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಆರಂಭವಾಯಿತು. ಸಂತ ಅಲೋಶಿಯಸ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹೀಗೆ ಹಲವು ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೧೩೬ ವರ್ಷಗಳ ಇತಿಹಾಸವಿದೆ. 2007ರಲ್ಲಿ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ ೪೦00ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. == ಸಂತ ಅಲೋಶಿಯಸ್ ಕಾಲೇಜು ಈಜುಕೊಳ == == ಕಾಲೇಜಿನ ನಿಕಾಯಗಳು() == ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಒಟ್ಟು ಆರು ನಿಕಾಯಗಳಿವೆ. ಕಲಾ ಅಧ್ಯಯನ ನಿಕಾಯ ವಿಜ್ಞಾನ ಅಧ್ಯಯನ ನಿಕಾಯ ವಾಣಿಜ್ಯ ಅಧ್ಯಯನ ನಿಕಾಯ ವ್ಯವಹಾರ ಅಧ್ಯಯನ ನಿಕಾಯ ವಿದ್ಯುನ್ಮಾನ ಅಧ್ಯಯನ ನಿಕಾಯ ಸಮಾಜಕಾರ್ಯ ಅಧ್ಯಯನ ನಿಕಾಯ ಬಿಸಿಎ, ಗಣಕ ವಿಜ್ಞಾನ ಮತ್ತು ಅನಿಮೇಶನ್ ನಿಕಾಯ == ವಿಭಾಗಗಳು == ಸಂತ ಅಲೋಶಿಯಸ್ ಕಾಲೇಜಿನ ಆರು ನಿಕಾಯಗಳಲ್ಲಿ ಒಟ್ಟು ೨೮ ವಿಭಾಗಗಳಿವೆ. == ಛಾಯಾಂಕಣ == == ಉಲ್ಲೇಖಗಳು ==